Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

April 28, 2009

Shankaracharya Jayanthi / ಶಂಕರಾಚಾರ್ಯ ಜಯಂತಿ

ಶಂಕರ ಜಯಂತಿ / ಶಂಕರಾಚಾರ್ಯ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಇದು ಶಂಕರಾಚಾರ್ಯರ ಜನ್ಮ ದಿನ. ಇವರನ್ನು ಆದಿ ಶಂಕರ, ಶಂಕರ ಭಗವತ್ಪಾದಾಚಾರ್ಯ ಎಂದೂ ಕರೆಯುತ್ತಾರೆ. ಸುಮಾರು ೮ನೇ ಶತಮಾನದಲ್ಲಿ ಜೀವನ ನಡೆಸಿದರು ಎಂದು ಹೇಳುತ್ತಾರೆ. ಇವರು ಕೇರಳದ ಕಾಲಡಿ ಎಂಬ ಊರಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಸನ್ಯಾಸವನ್ನು ಆಲಂಗಿಸಿದರು. ಇವರ ಜೀವಿತದ ಅವಧಿ ಕೇವಲ ೩೨ ವರ್ಷವಾದರೂ ಇವರು ಮಾಡಿರುವ ಸಾಧನೆ ಅಪಾರ. ಇವರು ಮನುಷ್ಯ ಸಾಮಾನ್ಯರಲ್ಲ, ದೇವರ ಸ್ವರೂಪ ಎಂದೇ ಹೇಳಬಹುದು.

ಹಿಂದೂ ಧರ್ಮದ ಪ್ರಚಾರಕ್ಕಾಗಿ ಮಠಗಳನ್ನು ಸ್ಥಾಪಿಸಿದರು. ಕನ್ನಡಿಗರಿಗೆ ಶೃಂಗೇರಿ ಶಾರದ ಪೀಠ ಗೊತ್ತೇ ಇದೆ. ಇದಲ್ಲದೇ ಗುಜರಾತ್ ರಾಜ್ಯದ ದ್ವಾರಕದಲ್ಲಿ, ಒರಿಸ್ಸಾ ರಾಜ್ಯದ ಪೂರಿಯಲ್ಲಿ ಮತ್ತು ಉತ್ತರಾಖಾಂಡ ರಾಜ್ಯದಲ್ಲಿ ಮಠಗಳನ್ನು ಸ್ಥಾಪಿಸಿದ್ದಾರೆ.ಶಂಕರಾಚಾರ್ಯರು ಬಹಳಷ್ಟು ರಚನೆಗಳನ್ನೂ ಮಾಡಿದ್ದರೆ. ಹಲವಾರು ದೇವರ ಸ್ತೋತ್ರಗಳನ್ನು ರಚಿಸಿದ್ದಾರೆ. ಭಗವದ್ಗೀತೆ, ಉಪನಿಷದ್ ಮತ್ತು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದಿದ್ದಾರೆ. ಅದ್ವೈತ ವೇದಾಂತ ಅಧ್ಯಯನ ಮಾಡುವವರು ಭಾಷ್ಯಗಳನ್ನೇ ಇಂದಿಗೂ ಅನುಸರಿಸುತ್ತಾರೆ.ಅದ್ವೈತ ಅನುಯಾಯಿಗಳಿಗೆ ಇವರೇ ಆದಿ ಗುರುಗಳು.

ಶಂಕರರಿಗಿಂತ ಮುಂಚೆಯೂ ಅದ್ವೈತ ಸಿದ್ಧಾಂತ ಇತ್ತು, ಆದರೆ ಇವರು ಅದಕ್ಕೆ ಒಂದು ನೆಲೆಗಟ್ಟು ಕೊಟ್ಟು, ದೇಶದ ಮೂಲೆ ಮೂಲೆಗೂ ಹೋಗಿ ಅದನ್ನು ಭೋಧಿಸಿ ವ್ಯಾಪಕಗೊಳಿಸಿದರು. ಅದ್ವೈತ ವೇದಾಂತದ ಸಿದ್ಧಾಂತವನ್ನು ದೃಢ ಪಡಿಸಿದರು.ಅದ್ವೈತವನ್ನು ಜನಪ್ರಿಯ ಮಾಡಿ, ಪ್ರಚಾರ ಮಾಡಿರುವುದರ ಮನ್ನಣೆಯೆಲ್ಲ ಆದಿ ಶಂಕರರಿಗೇ ಸೇರುತ್ತದೆ.

ನಮ್ಮ ಹಿಂದೂ ಧರ್ಮದ ಪ್ರಕಾರ ಮನುಷ್ಯನಿಗೆ ಪರಬ್ರಹ್ಮನ ಜ್ಞಾನ ಉಂಟಾಗಿ ಮೋಕ್ಷ ಹೊಂದುವುದೇ ಜೀವನದ ಉದ್ದೆಶವಾಗಿರಬೇಕು. ಈ ಲಕ್ಷ್ಯವನ್ನು ಮುಟ್ಟಲು ಹಲವಾರು ಸಾಧನಗಳು(means) ಹಾಗು ತತ್ವ ಸಿದ್ಧಾಂತಗಳಿವೆ (school of thought). ಇದರಲ್ಲಿ ಅದ್ವೈತ ವೇದಾಂತ ಸಿದ್ಧಾಂತವೂ ಒಂದಾಗಿದೆ. ಈ ಪೂಜೆ, ಮಂತ್ರ, ಸ್ತೋತ್ರ, ಹೋಮ , ಹವನ ಕರ್ಮಗಳೆಲ್ಲವೂ ಸಹ ಈ ಜ್ಞಾನ ಪ್ರಾಪ್ತಿಯ ಮಾರ್ಗದಲ್ಲಿ ಸಾಧನಗಳಷ್ಟೆ. ಪರಮ ಸಾಧನೆಗೆ ಇವೆಲ್ಲವೂ ಮೆಟ್ಟಿಲುಗಳಾಗಬೇಕು. ಪೂಜೆ ಪುನಸ್ಕಾರಗಳನ್ನು ಮಾಡಬೇಕು ನಿಜ, ಆದರೆ ಇದಕ್ಕಿಂತ ಮಿಗಿಲಾದ ಜ್ಞಾನದ ಅನ್ವೇಷಣೆಯಲ್ಲಿ ನಾವು ಹೋಗಬೇಕು. ಬರಿ ಪೂಜೆ ಸ್ತೋತ್ರಗಳಲ್ಲೇ ಮುಕ್ತಾಯ ಆಗಬಾರದು.

ಅದ್ವೈತ ವೇದಾಂತವನ್ನು ನಂಬುವ ಮನೆಯಿಂದ ಬಂದಿರುವ ನನಗೆ ಈ ವಿಶೇಷ ದಿನವನ್ನು ಆಚರಿಸುವುದಕ್ಕೆ ಬಹಳ ಸಂತೋಷವಾಗುತ್ತಿದೆ. ನಮ್ಮ ಅತ್ತೆ ಮಾವನವರು ವೆದಾಧ್ಯನ, ಉಪನಿಷದಗಳ ಅಧ್ಯಯನವನ್ನು ಸುಮಾರು ೧೫ ವರ್ಷಗಳಿಂದ ಮಾಡುತ್ತಿದ್ದರೆ. ಅವರಿಂದ ನಾನೂ ಬಹಳಷ್ಟು ತಿಳಿದುಕೊಂಡಿದ್ದೀನಿ, ಇನ್ನು ಅರಿತುಕೊಳ್ಳುವುದು ಬಹಳ ಇದೆ. ನಮ್ಮ ಅತ್ತೆಯವರು ಅದ್ವೈತದ ಬಗ್ಗೆ ಸರಳ ವಿವರಣೆ ಮಾಡಿ ನನಗೆ email ಕಳಿಸಿದ್ದಾರೆ , ಅದನ್ನು ಇಲ್ಲಿ ಹಾಕುತ್ತಿದ್ದೀನಿ .

" I thought I can just give a very simple account of what is Advaita. We all know ourselves as individuals and there is the world of living and non living things, inanimate objects and the whole cosmos. We constantly interact with the world. Many times we sense that this interaction is unpredictable. It means, the way we do things and the way the results come, it is not a straight forward relationship. So we find that there are many unknown factors. So all these unknown factors, we group together and call it God. Since calling God as 'it', doesnt make it feel good, we think of God as a person who is all powerful, and praying to him or her will help me to deal with the world. So there are 3 entities, namely, I the individual, the rest of creation which we call world and the other unknown, God. Advaita establishes that all these 3 are not totally different entities, but is is one entity only which is called Brahman. An analogy is, how sugar being the basic substance, can appear in various shapes and sizes, but in essence is one only. Shankaracharya establishes that this is what all the upanishads, bhagavad gita, brahma sutras are telling in one voice. How this conclusion is arrived at, forms the subject matter of vedanta."

Thanks a lot Amma for this write up :)

Some related links:







Arsha Vidya Gurukulam is an institute for traditional study of Advaitha vedanta, Sanskrit, Yoga etc. check this link for more
http://www.arshavidya.org/

Arsha Vidya Gurukulam satsangs - Read and Listen to satsangs by various gurujis.

http://www.avgsatsang.org/

ನಮ್ಮ ಮನಸ್ಸನ್ನು ಅಧ್ಯಾತ್ಮ ಚಿಂತನೆಯಲ್ಲಿ ತೊಡಗಿಸುವುದು ಹಬ್ಬದ ಉದ್ದೇಶ. ನನ್ನ ಬರಹವನ್ನು ಓದಿ ಅದ್ವೈತದ ಬಗ್ಗೆ ನಿಮಗೆ ಕುತೂಹಲ ಉಂಟಾಗಿ ಇನ್ನು ಹೆಚ್ಚು ತಿಳಿಯಬೇಕೆಂಬ ಆಸೆ ಹುಟ್ಟಿಸಲಿ ಎಂದು ನನ್ನ ಆಶಯ :)

April 19, 2009

First Anniversary of Pooja Vidhana / ಪೂಜಾ ವಿಧಾನಕ್ಕೆ ಈಗ 1 ವರ್ಷ!!




ಸ್ನೇಹಿತರೇ ,

ನನ್ನ ಬ್ಲಾಗ್ ಶುರು ಮಾಡಿ ಇವತ್ತಿಗೆ 1 ವರ್ಷ ಆಯಿತು. ಈ ಸಂದರ್ಭದಲ್ಲಿ ಓದುಗರಿಗೆಲ್ಲ ಧನ್ಯವಾದ ಹೇಳಕ್ಕೆ ಇಷ್ಟ ಪಡ್ತೀನಿ.


ಈ ಬ್ಲಾಗ್ ಶುರು ಮಾಡಿದಾಗ ಪೂಜೆ ಪುನಸ್ಕಾರದಲ್ಲಿ ಎಷ್ಟು ಜನಕ್ಕೆ ಆಸಕ್ತಿ ಇದೆಯೋ, ಯಾವ ತರಹ ಪ್ರತಿಕ್ರಿಯೆ ಬರುತ್ತೋ ಅಂತ ಯೋಚಿಸ್ತಾ ಇದ್ದೆ. ಈ ಒಂದು ವರ್ಷದಲ್ಲಿ ಸುಮಾರು 10,000 ಜನ ಇಲ್ಲಿಗೆ ಬಂದಿದ್ದಾರೆ,
ಅದರಲ್ಲಿ ಬಹಳ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದನ್ನು ನೋಡಿ ನನಗೆ ತುಂಬ ಖುಷಿ ಆಗುತ್ತಾ ಇದೆ. ನಿಮ್ಮ ಅಭಿಪ್ರಾಯಗಳಿಂದ ನನಗೆ ಇನ್ನಷ್ಟು ಸ್ಫೂರ್ತಿ , ಪ್ರೇರಣೆ ಬಂದಿದೆ.

ಪೂಜಾ ವಿಧಾನಕ್ಕೆ ಭೇಟಿ ನೀಡಿದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು!!!


ಇಲ್ಲಿಗೆ ಮತ್ತೆ ಬರುತ್ತಾ ಇರಿ, ನಿಮ್ಮ ಅಭಿಪ್ರಾಯ , ಸಲಹೆಗಳನ್ನು ನನಗೆ ಖಂಡಿತ ತಿಳಿಸಿ. ಮತ್ತೊಮ್ಮೆ ಧನ್ಯವಾದಗಳು:)

................................

Some numbers for you:
  • 52 Published posts
  • 11300 Hits
  • 3600 New Visitors
  • Lots of comments and appreciation :)
Thanks a lot for your overwhelming response!!!

Glitter Graphics

April 13, 2009

Devi Navaratna Malika Stotram in Kannada / ದೇವಿ ನವರತ್ನಮಾಲಿಕ ಸ್ತೋತ್ರ

ತಿಂಗಳು ಶ್ರೀ ಶಂಕರಾಚಾರ್ಯರ ಜಯಂತಿ ಬರುತ್ತಿದೆ. ಅದಕ್ಕಾಗಿ ಶಂಕರಾಚಾರ್ಯರು ರಚಿಸಿರುವ ಸ್ತೋತ್ರಗಳನ್ನು ಹಾಕುತ್ತಿದ್ದೀನಿ. ದೇವೀ ನವರತ್ನ ಮಾಲಿಕ ಅವರು ರಚಿಸಿರುವ ಇನ್ನೊಂದು ಸ್ತೋತ್ರ. ಇದರಲ್ಲಿ ಪಂಕ್ತಿಗಳಿವೆ. ಆದಿಶಕ್ತಿ ದೇವಿಯನ್ನು ವರ್ಣಿಸಿ ಸ್ತುತಿಸಿದ್ದಾರೆ. ಸ್ತೋತ್ರವು ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.



ನವರತ್ನಮಾಲಿಕಾ ಸ್ತೋತ್ರದ ಧ್ವನಿ ಮುದ್ರಣ ಕೆಳಗಿದೆ:

1.AudioLink - by Bombay Sisters


2.AudioLink - by Sankaran Namboodhiri


3.AudioLink - by Keerthana & Kruthi Bhat ಇವರ ಹಾಡನ್ನು ಕೇಳಲೇ ಬೇಕು. ಇಬ್ಬರು ಮಕ್ಕಳು ತುಂಬ ಸೊಗಸಾಗಿ ಹಾಡಿದ್ದಾರೆ.

April 8, 2009

Lalita Devi Pancharatnam in Kannada / Devi Pratah Samarana Stotra / ಲಲಿತ ದೇವಿ ಪಂಚರತ್ನ ಸ್ತೋತ್ರ / ದೇವಿ ಪ್ರಾತಃ ಸ್ಮರಣ ಸ್ತೋತ್ರ

ದೇವಿ ಪಂಚರತ್ನ ಅಥವಾ ಲಲಿತಾ ಪಂಚರತ್ನ ಅಥವಾ ದೇವಿ ಪ್ರಾತಃ ಸ್ಮರಣ ಸ್ತೋತ್ರವನ್ನು ಜಗದ್ಗುರು ಶ್ರೀ ಶಂಕರಾಚಾರ್ಯರು ರಚಿಸಿದ್ದಾರೆ. ಪಂಚ ಎಂದರೆ ಐದು, ಈ ಸ್ತೋತ್ರದಲ್ಲಿ ಐದು ಪಂಕ್ತಿಗಳಿವೆ. ಈ ಸ್ತೋತ್ರದಲ್ಲಿ ದೇವಿಯನ್ನು ಹೊಗಳಿ ಸ್ತುತಿ ಮಾಡಿದ್ದರೆ. ಇದು ಸಹಸ್ರನಾಮದಷ್ಟು ದೊಡ್ದದಾಗಿಲ್ಲ, ಚಿಕ್ಕದಾಗಿದ್ದು ಕಲಿಯಲು ಸುಲಭವಾಗಿದೆ. ಪಂಚರತ್ನ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಸ್ತೋತ್ರದ ಧ್ವನಿ ಮುದ್ರಣ ಕೆಳಗಿದೆ :
1.AudioLink - by Bombay Sisters

2.AudioLink - by M.S.Sheela [song 3]


3.AudioLink - by Usha Mangeshkar

4.AudioLink - by Vijayalakshmi Subramaniam below
ಆದಿ ಶಕ್ತಿಯು ಎಲ್ಲರನ್ನು ಸದಾ ಕಾಪಾಡಲಿ :)

April 2, 2009

Sri Rama Navami Festival / ಶ್ರೀ ರಾಮ ನವಮಿ ಹಬ್ಬ

"ರಾಮಾಯ ರಾಮ ಭದ್ರಾಯ ರಾಮ ಚಂದ್ರಾಯ ವೇದಸೆ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ"


ರಾಮ ನವಮೀ
ಶ್ರೀ ರಾಮನ ಜನ್ಮ ದಿನ . ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಶ್ರೀ ರಾಮ ಮನೆದೇವರು ಇರುವವರು ಒಂಭತ್ತು ದಿನದ ಹಬ್ಬ ಮಾಡುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ , ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ ೯ ದಿನದ ರಾಮೋತ್ಸವ ಮಾಡುತ್ತಾರೆ.
ರಾಮನವಮಿ ಹಬ್ಬ ಆಚರಿಸಲು ತುಂಬ ಪರಿಕರಣೆ ಇಲ್ಲ. ಇದು ಸರಳವಾದ ಹಬ್ಬ. ಸಾಮಾನ್ಯವಾಗಿ ರಾಮ ಪಟ್ಟಾಭಿಷೇಕದ / ರಾಮ ಪಂಚಾಯತದ ಪಟವನ್ನು ಇಟ್ಟು ಪೂಜೆ ಮಾಡುತ್ತಾರೆ. ಇದರಲ್ಲಿ ಶ್ರೀ ರಾಮನ ಜೊತೆಗೆ ಎಲ್ಲ ತಮ್ಮಂದಿರೂ ಇರುತ್ತಾರೆ. ಶ್ರೀ ರಾಮಚಂದ್ರನಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ರಾಮ ಅಷ್ಟೋತ್ತರ ಇಲ್ಲಿದೆ. ಪಾನಕ ಕೋಸಂಬರಿಗಳನ್ನು ನೈವೇದ್ಯ ಮಾಡಿ ಇತರರಿಗೆ ಹಂಚುತ್ತಾರೆ. ರಾಮನ ಭಜನೆ, ಹಾಡುಗಳಿಂದ ರಾಮನ ಧ್ಯಾನ ಮಾಡುತ್ತಾರೆ.

ರಾಮ ನವಮಿಯ ಇನ್ನೊಂದು ವಿಶೇಷತೆ ರಾಮ ನಾಮ ಬರೆಯುವುದು. ರಾಮ ನಾಮದ ಮಹಿಮೆ ಅಪಾರ. ಇದನ್ನು ತಾರಕ ನಾಮ ಎಂದೂ ಹೇಳುತ್ತಾರೆ. (ತಾರಕ = ಸಂರಕ್ಷಕ, ಕಾಪಾಡುವವನು, ಪಾರುಮಾಡುವುದು) ರಾಮ ನಾಮವನ್ನು ಜಪಿಸಿದರೆ ಅವನು ನಮ್ಮನ್ನು ಸದಾ ಸಂರಕ್ಷಿಸಿ, ಕಾಪಾಡುತ್ತಾನೆ. ರಾಮನ ಧ್ಯಾನಕ್ಕೆ ರಾಮನಾಮ ಬರೆಯುವುದು ಒಂದು ಉತ್ತಮ ಸಾಧನ. "ರಾಮ" "ಶ್ರೀ ರಾಮ" "ಶ್ರೀ ರಾಮ ಜಯ ರಾಮ" "ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಇತ್ಯಾದಿ - ನಿಮಗೆ ಇಷ್ಟವಾದ ನಾಮವನ್ನು ಜಪಿಸಬಹುದು. ರಾಮ ನವಮಿಯ ದಿನ ರಾಮ ನಾಮ ಬರೆದರೆ ಅತಿ ಉತ್ತಮ. ನಿಮ್ಮ ಕೈಲಾದಷ್ಟು ನಾಮ ಬರೆಯಬಹುದು, ಕನಿಷ್ಠ ಪಕ್ಷ 9 ನಾಮಗಳನ್ನಾದರೂ ಬರೆಯಿರಿ. ಇದನ್ನು ಮಕ್ಕಳೂ ಬರೆಯಬಹುದು. ನಮ್ಮ ತಾಯಿ ನನಗೆ ಓದಿ ಬರೆಯಲು ಬಂದ ತಕ್ಷಣ ಈ ರಾಮ ನಾಮ ಬರೆಯುವ ಅಭ್ಯಾಸ ಮಾಡಿಸಿದರು. ಆ ಅಭ್ಯಾಸ ಇಂದಿಗೂ ಮುಂದುವರೆಸುತ್ತಿದ್ದೀನಿ.

ಯಾರಿಗೆ ಬೇಕು ಪಾನಕ , ಕೋಸಂಬರಿ , ಮಜ್ಜಿಗೆ :)
click here for the recipe
ರಾಮ ನವಮಿ ಅಂದರೆ ಪಾನಕ, ಮಜ್ಜಿಗೆ, ಕೋಸಂಬರಿ ಸಮಾರಾಧನೆ ನೆನಪಾಗುತ್ತದೆ. ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಪಾನಕ, ಕೋಸಂಬರಿಗಳನ್ನು ಹಂಚುತ್ತಾರೆ. ಬೇಸಿಗೆಯ ಸುಡುವ ಬಿಸಿಲಿಗೆ ತಂಪು ಮಾಡಲು ತಂಪಾದ ಪಾನಕ ಮಜ್ಜಿಗೆ ಹೇಳಿ ಮಾಡಿಸಿದ ಜೋಡಿ. ಈ ಕಾರಣಕ್ಕೇ ಈ ಪಾನೀಯಗಳನ್ನು ಮಾಡುತ್ತಾರೆ ಅನ್ನಿಸುತ್ತದೆ. ಸಾಮಾನ್ಯವಾಗಿ ಬೇಲದಹಣ್ಣು (wood apple) ಮತ್ತು ಬೆಲ್ಲ ಸೇರಿಸಿ ಷರಬತ್ತು ಮಾಡುತ್ತಾರೆ. ಬೇಲದ ಹಣ್ಣು ಸಿಗದಿದ್ದರೆ ನಿಂಬೆ ಹಣ್ಣಿನಿಂದ ಮಾಡಿ. ಒಟ್ಟಿನಲ್ಲಿ ಯಾವುದೋ ಒಂದು ಹಣ್ಣಿನಿಂದ ಪಾನಕ ಮಾಡಿ ಅಷ್ಟೆ :)

ಶ್ರೀ ರಾಮ ಸ್ತೋತ್ರಗಳ ಪಟ್ಟಿ ಇಲ್ಲಿದೆ:
  1. ರಾಮ ಅಷ್ಟೋತ್ತರ/Rama Ashtottara(kannada)
  2. श्री राम अष्टोत्तर / Rama Ashtottara (English)
  3. ರಾಮ ರಕ್ಷಾ ಸ್ತೋತ್ರ/Rama Raksha Stotra
  4. ರಾಮ ಅಷ್ಟಕ / Rama Ashtaka
  5. ರಾಮ ಸಹಸ್ರನಾಮ/Rama Sahasranama
  6. ನಾಮ ರಾಮಾಯಣ/Nama Ramayana
ಶ್ರೀ ರಾಮನ ಹಾಡುಗಳು:
ರಾಮ ನವಮಿ ಬಗ್ಗೆ ಹೇಳುವಾಗ ಇನ್ನೊಂದು ಸುಮಧುರ ಸಂಗತಿ ನೆನಪಾಗುತ್ತದೆ. ಅದು ರಾಮ ನವಮಿ ಸಂಗೀತ ಕಛೇರಿಗಳು. ಹಲವಾರು ಕಡೆ ವಾರ , ತಿಂಗಳುಗಟ್ಟಲೆ ಕಛೇರಿ ನಡೆಯುತ್ತದೆ. ಹೆಸರಾಂತ ಸಂಗೀತಗಾರರು ಸಂಗೀತರಸಿಕರ ಮನಸ್ಸನ್ನು ತಣಿಸುತ್ತಾರೆ. ಬೆಂಗಳೂರಿನ ಚಾಮರಾಜಪೇಟೆ ಅಲ್ಲಿರುವ ರಾಮ ಸೇವಾ ಮಂಡಳಿ ಯವರು ಏರ್ಪಡಿಸುವ ರಾಮ ನವಮಿ ಸಂಗೀತ ಕಛೇರಿ ಹೆಸರುವಾಸಿಯಾದದ್ದು. ಸುಮಾರು ೬೦ ವರ್ಷಗಳಿಂದ ನಡೆದು ಬರುತ್ತಾಇದೆ. ಇಷ್ಟು ದೂರ ಇರುವ ನಾನು ಈ ಕಛೇರಿಗಳನ್ನು ಮಿಸ್ ಮಾಡ್ತೀನಿ. ಬೆಂಗಳೂರಲ್ಲಿ ಇರುವವರು ಸಂಗೀತವನ್ನು ಆನಂದಿಸಿ. ಅವರದ್ದೇ website ಕೂಡ ಇದೆ. ಹೆಚ್ಚಿನ ಮಾಹಿತಿ ಇಲ್ಲಿದೆ.
Rama Seva Mandali,Bangalore - Rama Navami Concerts Apr 8 to May 8 2016

ಶ್ರೀ ರಾಮನು ಎಲ್ಲರಿಗೂ ಮಂಗಳವನ್ನು ಮಾಡಲಿ :)
Blog Widget by LinkWithin