Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

June 26, 2009

Vishnu Sahasranama in Kannada / ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ

ಶ್ರೀ ವಿಷ್ಣು ಸಹಸ್ರನಾಮವನ್ನು ಎಲ್ಲರೂ ಕೇಳಿಯೇ ಇರುತ್ತೀವಿ. ಇದು ನಮ್ಮ ಹಿಂದೂ ಧರ್ಮದ ಪವಿತ್ರ, ಶ್ರೇಷ್ಠ ಮತ್ತು ಬಹಳ ಸಾಮಾನ್ಯವಾಗಿ ಪಠಿಸುವ ಸ್ತೋತ್ರ . ಸಹಸ್ರ ಎಂದರೆ ಸಾವಿರ ಎಂದರ್ಥ. ವಿಷ್ಣು ಸಹಸ್ರನಾಮದಲ್ಲಿ ವಿಷ್ಣುವಿನ 1000 ನಾಮಗಳಿವೆ. ಇದು ಮಹಾಭಾರತದ ಅನುಶಾಸನ ಪರ್ವದ ೧೪೯ ನೆ ಅಧ್ಯಾಯದಲ್ಲಿ ಕಂಡುಬರುತ್ತದೆ. ಮಹಾಭಾರತದ ಯುದ್ಧ ಆದ ಮೇಲೆ ಭೀಷ್ಮನು ಮರಣಶಯ್ಯೆ ಯಲ್ಲಿ ಇರುವಾಗ ಯುಧಿಷ್ಟಿರನು ಅವರನ್ನು ಧರ್ಮ ಪ್ರಶ್ನೆಗಳ ಉತ್ತರ ಕೇಳುತ್ತಾನೆ. ಭೀಷ್ಮರು ಉತ್ತರವಾಗಿ ಶ್ರೀ ವಿಷ್ಣು ಸಹಸ್ರನಾಮವನ್ನು ಹೇಳುತ್ತಾರೆ. ಶ್ರೀ ಶಂಕರಾಚಾರ್ಯರು, ಪರಾಶರ ಭಟ್ಟರು, ಮಧ್ವಾಚಾರ್ಯರು, ಮುಂತಾದವರು ಇದಕ್ಕೆ ತಮ್ಮದೇ ರೀತಿಯಲ್ಲಿ ಭಾಷ್ಯ ಬರೆದಿದ್ದಾರೆ. ಒಂದು ಸ್ತೋತ್ರ ಪಠಿಸುವುದರಿಂದ ಎಲ್ಲಾ ತರದ ಪುಣ್ಯ ಪ್ರಾಪ್ತಿ ಆಗುವುದು ಎಂಬ ನಂಬಿಕೆ.

ಈ ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ.8 ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

Pages 1 - 4



Pages 5 - 8



ಈ ಸ್ತೋತ್ರವನ್ನು ಹಲವಾರು ಗಾಯಕರು ಹಾಡಿದ್ದಾರೆ. M.S.Subbulakshmi ಅವರು 1970 ಅಲ್ಲಿ ಹಾಡಿರುವ ಧ್ವನಿ ಮುದ್ರಣ 40 ವರ್ಷಗಳಾದರೂ ಇಂದಿಗೂ ಅತ್ಯಂತ ಜನಪ್ರಿಯ!!!

1.AudioLink - M.S.Subbulakshmi

2.AudioLink - Mahanadhi Shobhana

3.AudioLink - M.S.Sheela


Meaning of Vishnu Sahasranama Stotram


Vishnu Sahasranamam Video by M.S.Subbalakshmi


ಭಗವಂತನು
ಎಲ್ಲರನ್ನು ಹರಸಿ ಕಾಪಾಡಲಿ:)

June 17, 2009

Sankashtahara Chaturthi / Sankashta Chauthi Vrata / ಸಂಕಷ್ಟಹರ ಚತುರ್ಥಿ ವ್ರತ

Update:Pooja Vidhana Sahitya

A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.

Buy Vratha Books Online

----------------------------------------------------------------------------

ಸಂಕಷ್ಟಹರ ಚತುರ್ಥಿ ವ್ರತ - ಹೆಸರೇ ಹೇಳುವಂತೆ ಸಂಕಷ್ಟಗಳನ್ನು ಹರಣ/ಪರಿಹಾರ ಮಾಡುವಂತ ವ್ರತ. ಸಂಕಷ್ಟ ಚೌತಿ ವ್ರತ / ಸಂಕಷ್ಟ ಗಣಪತಿ ವ್ರತ ಎಂದೂ ಕರೆಯುತ್ತಾರೆ. ವ್ರತದಲ್ಲಿ ಶ್ರೀ ವಿನಾಯಕನಿಗೆ ಪೂಜೆ ನಡೆಯುತ್ತದೆ. ಪ್ರತಿ ತಿಂಗಳು ಬಹುಳ/ಕೃಷ್ಣ ಪಕ್ಷದ ಚತುರ್ಥಿ ದಿನ ವ್ರತವನ್ನು ಮಾಡುತ್ತಾರೆ. ವ್ರತವನ್ನು ಶ್ರಾವಣ ಬಹುಳ ಚತುರ್ಥಿ ದಿನ ಪ್ರಾರಂಭ ಮಾಡಬೇಕು ಅಂತ ಇದೆ.

ದಿನ ಬೆಳಿಗ್ಗೆ ಎಳ್ಳನ್ನು ಅರೆದು ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳ ಸ್ನಾನ ಮಾಡಬೇಕು. ಸಂಕಷ್ಟಹರ ಗಣಪತಿ ವ್ರತ ಮಾಡುತ್ತಿದ್ದೀನಿ ಅಂತ ಸಂಕಲ್ಪ ಮಾಡಬೇಕು. ದಿನವೆಲ್ಲ ಉಪವಾಸ ಇರಬೇಕು. ಇದು ಕಷ್ಟವಾದರೆ ಹಾಲು, ಹಣ್ಣು ಸೇವಿಸಬಹುದು. ಗಣಪತಿ ಪೂಜೆಯನ್ನು ಚಂದ್ರನ ಪ್ರಕಾಶದಲ್ಲಿ ಮಾಡಬೇಕು. ಅದ್ದರಿಂದ ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು.

ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು ಹಾಕಿ, ಅದರ ಮೇಲೆ ತೆಂಗಿನಕಾಯಿ ಇಟ್ಟು, ಪಕ್ಕದಲ್ಲಿ ವೀಳ್ಯದ ಎಲೆ ಇಡಬೇಕು. ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಕಲಶಕ್ಕೆ ಗಣಪತಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ಕಲಶ ಸ್ಥಾಪನೆ ಚಿತ್ರ ಕೆಳಗಿದೆ.click on the image to enlarge



ಕಲಶ ಸ್ಥಾಪನೆ

ನೈವೇದ್ಯಕ್ಕೆ ಕರಿಗಡುಬು, ಮೋದಕ ಮಾಡಬೇಕು. ಮೈದಾ ಹಿಟ್ಟು ,ರವೆಯನ್ನು ಕಲಸಿ ಕಣಕ (dough) ಮಾಡಿ, ಒಳಗೆ ಹೂರಣ ಸೇರಿಸಿ ಎಣ್ಣೆಯಲ್ಲಿ ಕರಿಯುತ್ತಾರೆ. ಹೂರಣ 2 ತರಹ ಮಾಡುತ್ತಾರೆ - dry (ಕೊಬ್ಬರಿ ತುರಿ, ಸಕ್ಕರೆ ,ಏಲಕ್ಕಿ) ಅಥವಾ wet (ಬೆಲ್ಲ,ಕಾಯಿ ತುರಿ, ಏಲಕ್ಕಿ). ಈ ಹಬ್ಬಕ್ಕೆ ಮಾಡುವಾಗ ಹೂರಣಕ್ಕೆ ಎಳ್ಳನ್ನು ಸೇರಿಸಬೇಕು. ನೈವೇದ್ಯಕ್ಕೆ ಕನಿಷ್ಠ 10 ಕರಿಗಡುಬು 10 ಮೋದಕಗಳನ್ನು ಮಾಡಿಕೊಳ್ಳಬೇಕು.
ಪೂಜೆಯ ನಂತ 5 ಕಡುಬು, 5 ಮೋದಕ ದಾನ ಮಾಡಿ, ಉಳಿದ 5 ಕಡುಬು, ಮೋದಕ ನೀವು ಪ್ರಸಾದವಾಗಿ ಸ್ವೀಕರಿಸಿ. ಹತ್ತಕ್ಕಿಂತ ಜಾಸ್ತಿ , ಎಷ್ಟು ಬೇಕೋ ಅಷ್ಟು ಕರಿಗಡುಬು, ಮೋದಕ ಮಾಡಿಕೊಳ್ಳಬಹುದು :)

ಚಂದ್ರೋದಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

1.Moonrise and Moonset time

2.Moonrise and Moonset calculator

ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು. ಕಲಶ ಸ್ಥಾಪಿಸಿ , ಜೊತೆಗೆ ಗಣಪತಿ ಪಟ, ವಿಗ್ರಹವನ್ನು ಇಟ್ಟು ಪೂಜೆ ಮಾಡಿ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಕರಿಗಡುಬು, ಮೋದಕವನ್ನು ನೈವೇದ್ಯ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆಯ ನಂತರ ಊಟ ಮಾಡಬಹುದು.

ನಮ್ಮ ಮನೆಯಲ್ಲಿ ಸಂಕಷ್ಟಹರ ಚತುರ್ಥಿ ಪೂಜೆ
(click on the image to enlarge)

ಸಂಕಷ್ಟಹರ ಗಣಪತಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:

Vrata + Kathe Audio Link


ಪೂಜೆಯ ನಂತರ 5 ಕರಿಗಡುಬು, 5 ಮೋದಕ ಮತ್ತು ಉಪಾಯಿನ ದಾನ, ದಕ್ಷಿಣೆಯನ್ನು ಸತ್ಪಾತ್ರರಿಗೆ ದಾನ ಕೊಟ್ಟು ಆಶೀರ್ವಾದ ಪಡೆಯಿರಿ. ಹೀಗೆ ೨೧ ಸಾರಿ ವ್ರತಗಳನ್ನು ಆಚರಿಸಿ ನಂತರ ಉದ್ಯಾಪನ ಮಾಡುತ್ತಾರೆ. ನಿಮ್ಮ ಇಚ್ಛೆ , ಶಕ್ತಿ ಸಾಮರ್ಥ್ಯಗಳಿಗೆ ಅನುಸಾರವಾಗಿ ಎಷ್ಟು ಸಾರಿ ಬೇಕಾದರೂ ವ್ರತವನ್ನು ಆಚರಿಸಬಹುದು.
ಗಣಪತಿಯು ನಿಮ್ಮ ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ :)

ಅಂಗಾರಕ ಸಂಕಷ್ಟ ಚತುರ್ಥಿ / ಅಂಗಾರಕಿ ಸಂಕಷ್ಟ ಚತುರ್ಥಿ
ಅಂಗಾರಕ ಎಂದರೆ ಮಂಗಳ ಗ್ರಹ . ಹೀಗಾಗಿ ಮಂಗಳ ವಾರ ಬರುವ ಸಂಕಷ್ಟ ಚತುರ್ಥಿಗೆ ಈ ಹೆಸರು. ಇದು ಅಪರೂಪ. ವರ್ಷದಲ್ಲಿ ಒಂದು - ಎರಡು ಬಾರಿ ಬರಬಹುದು ಅಷ್ಟೇ. ಅಂಗಾರಕ ಸಂಕಷ್ಟ ಚತುರ್ಥಿ ಹೆಚ್ಚು ವಿಶೇಷ. ಈ ದಿನ ಪೂಜೆ ಮಾಡಿದರೆ ಶ್ರೇಷ್ಟ ಎಂಬ ನಂಬಿಕೆ.


ಗಣಪತಿ ಹಾಡು/ ಸ್ತೋತ್ರಗಳು:


5.Ganesha Sahasranama
6.Ganesha Pratah Smarana Stotra

June 4, 2009

Upcoming Posts / ಮುಂಬರುವ ಲೇಖನಗಳು - Topics Posted

Update - Aug 6 2009:

Finally I have posted all these stotras in my blog now :) Click on the name to go to the respective link.


June 4 2009:


ಕಳೆದ
2-3 ವಾರಗಳು
ಕೆಲಸ-ಕಾರ್ಯ, ಚಟುವಟಿಕೆಯಿಂದ ತುಂಬಿ ಹೋಗಿತ್ತು. ನನಗೆ ಬಿಡುವಿರಲಿಲ್ಲ. ಹೀಗಾಗಿ ಬ್ಲಾಗ್ ಕಡೆ ಗಮನ ಕೊಡಲಾಗಲಿಲ್ಲ. ಯಾವುದೇ ಹೊಸ post ಬರೆದಿಲ್ಲ. ಈಗ ಸಮಯ ಸಿಗುತ್ತಿದೆ, ಹೊಸ ಲೇಖನಗಳನ್ನು ಬೇಗ ಬರೆಯುತ್ತೀನಿ
:)ನನಗೆ ಓದುಗರಿಂದ ಬಹಳಷ್ಟು ಕೋರಿಕೆಗಳು (requests) ಬಂದಿವೆ. ಸ್ತೋತ್ರದ ಬಗ್ಗೆ ಬರೆಯಿರಿ, ಪೂಜೆಯ ಬಗ್ಗೆ ಬರೆಯಿರಿ ಎಂದು. ಬಹಳ ಜನ ಒಂದೇ ಪೂಜೆ/ಸ್ತೋತ್ರದ ಬಗ್ಗೆ ಕೇಳಿದ್ದಾರೆ. ತಿಂಗಳು ಯಾವುದೇ ವಿಶೇಷ ಹಬ್ಬ/ಪೂಜೆ ಇಲ್ಲ. ಹಾಗಾಗಿ ನಿಮ್ಮ ಕೋರಿಕೆಗಳನ್ನು ಪೂರೈಸುವ ಪ್ರಯತ್ನ ಮಾಡುತ್ತೀನಿ.

ಸಧ್ಯದಲ್ಲೇ ಬರಲಿರುವ ಬರಹಗಳು / Upcoming Posts:

  1. Sankashtahara Chaturti Pooja Vidhana / ಸಂಕಷ್ಟಹರ ಚತುರ್ಥಿ ಪೂಜಾ ವಿಧಾನ
  2. Soundarya Lahari Stotra / ಸೌಂದರ್ಯ ಲಹರಿ ಸ್ತೋತ್ರ
  3. Vishnu Sahasranama / ವಿಷ್ಣು ಸಹಸ್ರನಾಮ
  4. Shiva Tandava Stotra / ಶಿವ ತಾಂಡವ ಸ್ತೋತ್ರ


ಸ್ತೋತ್ರಗಳನ್ನು ಶೀಘ್ರವಾಗಿ ಬ್ಲಾಗಿನಲ್ಲಿ ಹಾಕುತ್ತೀನಿ :)


PS: If you have any more requests, please leave a comment in the blog or email me or contact me here. I will try to post it asap:)
Blog Widget by LinkWithin