Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

May 23, 2010

Kanakadhara Stotra in Kannada / ಕನಕಧಾರಾ ಸ್ತೋತ್ರ


ಶ್ರೀ ಶಂಕರಾಚಾರ್ಯರು ರಚಿಸಿರುವ ಕನಕಧಾರ ಸ್ತೋತ್ರ ಶ್ರೀ ಮಹಾಲಕ್ಷ್ಮಿಯನ್ನು ಸ್ತುತಿ ಮಾಡುತ್ತದೆ. ಈ ಸ್ತೋತ್ರವನ್ನು ಪಠಿಸಿದರೆ ಕಷ್ಟಗಳು ಹೋಗಿ, ಐಶ್ವರ್ಯ, ಸಂಪತ್ತು, ಅಭಿವೃದ್ಧಿ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ. ಓದುಗರೊಬ್ಬರು ಈ ಸ್ತೋತ್ರವನ್ನು ಪ್ರಕಟಿಸಿ ಅಂತ ಕೋರಿಕೆ ಮಾಡಿದ್ದರು. ಸ್ತೋತ್ರ ಕನ್ನಡದಲ್ಲಿದೆ.


ದೊಡ್ಡದಾಗಿ ಮಾಡಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio link by Bombay Sister

2.Audio Link by M.S.Subbalakshmi

3.Another Audio Link


May 15, 2010

Akshaya Tritiya / ಅಕ್ಷ ತದಿಗೆ


ಅಕ್ಷಯ ತೃತೀಯ / ಅಕ್ಷ ತದಿಗೆ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ತ್ರಿತೀಯ / ತದಿಗೆ ದಿನ ಆಚರಿಸುತ್ತಾರೆ. ಇದು ರೋಹಿಣಿ ನಕ್ಷತ್ರ, ಬುಧವಾರ ಬಂದರೆ ಇನ್ನೂ ಹೆಚ್ಚು ವಿಶೇಷ. ಅಕ್ಷಯ ಎಂದರೆ ಕ್ಷಯವಾಗದ, ಮುಗಿಯದ, ಬರಿದಾಗದ, ಖಾಲಿ ಆಗದ ಎಂದರ್ಥ. ಅಂತಯೇ ಈ ದಿನ ಮಾಡಿದ ಎಲ್ಲ ಕೆಲಸಗಳಿಂದ ಅಕ್ಷಯವಾದ ಪುಣ್ಯ, ಲಾಭ ದೊರೆಯುತ್ತದೆ ಎಂಬ ನಂಬಿಕೆ.

ಈ ದಿನ ಐಶ್ವರ್ಯ, ಆಸ್ತಿ, ಸಂಪತ್ತನ್ನು ಪಡೆದರೆ ಅದು ಅಕ್ಷಯವಾಗುವುದು ಎಂಬ ನಂಬಿಕೆ. ಹೀಗಾಗಿ ಬಂಗಾರ ಖರೀದಿಸಲು ಒಳ್ಳೆಯ ದಿನ. ಖರೀದಿ ಮಾಡಿದ ವಡವೆಗಳನ್ನು ಗಂಧ ಫಲ ಪುಷ್ಪಗಳಿಂದ ಪೂಜಿಸಿ ಧರಿಸಬೇಕು. ಬಹಳ ಜನ ಹೊಸ ಮನೆ, ಆಸ್ತಿ, ಜಮೀನು, ವಾಹನ, ಇತ್ಯಾದಿಗಳನ್ನು ಖರೀದಿ ಮಾಡುತ್ತಾರೆ. ಹಲವಾರು ಶುಭ ಸಮಾರಂಭಗಳನ್ನೂ ಆಚರಿಸುತ್ತಾರೆ. ಮದುವೆ, ಮುಂಜಿ, ಗುದ್ದಲಿ ಪೂಜೆ, ಗೃಹ ಪ್ರವೇಶ, ಚೌಲ ಅಕ್ಷರಾಭ್ಯಾಸ, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಕ್ರಮಗಳನ್ನು ಈ ದಿನ ಮಾಡುತ್ತಾರೆ.

ನಾವು ಪಡೆದ, ಗಳಿಸಿದ ಸಂಪತ್ತು ಅಕ್ಷ್ಯವಾಗುವುದರ ಜೊತೆಗೆ , ನಾವು ಕೊಟ್ಟ ದಾನ, ಮಾಡಿದ ಒಳ್ಳೆ ಕಾರ್ಯಗಳಿಂದ ಬರುವ ಪುಣ್ಯವು ಅಕ್ಷಯವಾಗುತ್ತದೆ. ಹೀಗಾಗಿ ಈ ದಿನ ನಿಮ್ಮ ಶಕ್ತಿಗನುಸಾರವಾಗಿ ದಾನ ಮಾಡುವುದು ಉಚಿತ.ಈ ದಿನ ಮಾಡಿದ ಪೂಜೆ, ಜಪ, ಹೋಮಾದಿಗಳು ಅಕ್ಷಯವಾದ ಪುಣ್ಯ ಕೊಡುತ್ತದೆ. ಸಮುದ್ರ ಸ್ನಾನದಿಂದ ವಿಶೇಷ ಫಲ. ಸತ್ಪಾತ್ರರಿಗೆ ಅನ್ನದಾನ, ದಕ್ಷಿಣೆ ದಾನ ಮಾಡುವುದು ಸೂಕ್ತ. ಅಕ್ಷಯ ತ್ರಿತೀಯ ಮಹಾತ್ಮೆಯನ್ನು ಪಾರಾಯಣ ಮಾಡಿ.

ಈ ಹಬ್ಬಕ್ಕೆ ವಿಶೇಷವಾದ ಪೂಜೆ, ನಿಯಮ ಅಂತ ಇಲ್ಲ. ನಿಮ್ಮ ಮನೆಯಲ್ಲಿ ನಡೆಸಿಕೊಂಡು ಬಂದಿರುವ ಪದ್ಧತಿಯನ್ನು ಅನುಸರಿಸಿ. ನಮ್ಮ ಮನೆಯಲ್ಲಿ ಈ ದಿನ ಗೌರಿ ದೇವಿಗೆ ವಿಶೇಷ ಪೂಜೆ ಮಾಡುತ್ತಾರೆ. ಭಕ್ತಿಯಿಂದ ಪೂಜೆ ಮಾಡಿ, ದೇವಿಯ ಹೆಸರಲ್ಲಿ ಸುಮಂಗಲಿಯರಿಗೆ ಅರಿಶಿನ ಕುಂಕುಮ, ದಕ್ಷಿಣೆ, ಪಾನಕ ಕೋಸಂಬರಿ ಕೊಡುವ ಪದ್ಧತಿ ಇದೆ. ಒಟ್ಟಿನಲ್ಲಿ ಈ ದಿನ ಮಾಡಿದ ಒಳ್ಳೆಯ ಕಾರ್ಯಗಳಿಗೆ ಅತಿಶಯವಾದ ಪುಣ್ಯವಿದೆ.

Related Link

May 8, 2010

Purusha Sukta in Kannada / ಪುರುಷ ಸೂಕ್ತ

ಪುರುಷ ಸೂಕ್ತ ವೇದದಲ್ಲಿ ಇರುವ ಮಂತ್ರ. ಇದರಲ್ಲಿ ೨೪ ಪಂಕ್ತಿಗಳಿವೆ . ಮೊದಲ ೧೮ ನ್ನು ಪೂರ್ವ ನಾರಾಯಣ ಎಂದೂ, ಕೊನೆಯ ೬ ಪೊಂಕ್ತಿಗಳನ್ನು ಉತ್ತರ ನಾರಾಯಣ ಎಂದೂ ಕರೆಯುತ್ತಾರೆ. ಇದರ ಅರ್ಥವನ್ನು ಬೇರೆ ಬೇರೆ ತರಹಅನುವಾದಿಸಿದ್ದಾರೆ. ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಪುರುಷ ಸೂಕ್ತ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




1.Audio Link by Y N Sharma

2.Audio Link by NS Prakash Rao

3. Another audio link below

Blog Widget by LinkWithin